Karnataka Forest Department


ಇ-ಗಸ್ತು/ e-Gastu
ಅರಣ್ಯಗಳ, ಅರಣ್ಯ ಗಡಿಗಳ ಮತ್ತು ವನ್ಯ ಸಂಪತ್ತಿನ ರಕ್ಷಣೆ, ಸಂರಕ್ಷಣೆ ಮತ್ತು ಅಭಿವೃದ್ಧಿಯು ಇಲಾಖೆಯ ಮುಖ್ಯ ಧ್ಯೇಯಗಳಲ್ಲಿ ಒಂದಾಗಿದ್ದು, ಮುಂಚೂಣಿ ಸಿಬ್ಬಂದಿಗಳ ನಿಯಮಿತ ಗಸ್ತು/ ಪಹರೆಗಳನ್ನು ದಾಖಲಿಸಲು, ಇಲಾಖೆಯ ಸಿಬ್ಬಂದಿಗಳ ದೈನಂದಿನ ಅಧಿಕೃತ ಕಾರ್ಯಚಟುವಟಿಕೆಗಳನ್ನು ದಾಖಲಿಸಲು ಇ-ಗಸ್ತು ತಂತ್ರಾಂಶವನ್ನು ಅಭಿವೃದ್ಧಿ ಪಡಿಸಿ ನಿಯೋಜಿಸಲಾಗಿರುತ್ತದೆ. ಗಸ್ತಿನ ಸಂದರ್ಭದಲ್ಲಿ ಗಮನಿಸಲಾಗುವ ಅಂಶಗಳನ್ನು ಆಪ್‌ ಮೂಲಕ ದಾಖಲಿಸಲು ಅವಕಾಶವಿದ್ದು, ವೆಬ್‌ ಆವೃತ್ತಿಯ ಮೂಲಕ ಸಿಬ್ಬಂದಿಗಳು ಮತ್ತು ಅಧಿಕಾರಿಗಳು ಈ ಎಲ್ಲಾ ವಿವರಗಳನ್ನು ವೀಕ್ಷಿಸಲು ಮತ್ತು ಡಾಟಾ ಆಧಾರಿತ ನಿರ್ಧಾರಗಳನ್ನು ಕೈಗೊಳ್ಳಲು ಸಹಾಯಕವಾಗಿದೆ.